ಕಲಾಂ ಪಯಣ… ಭೂಮಿಯಿಂದ ಭಾನುವರೆಗೆ..

ಭಾರತದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ರಾಷ್ಟ್ರಪತಿ ಎನಿಸಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹುಟ್ಟಿದ್ದು 1931ರ ಅಕ್ಟೋಬರ್ 15ರಂದು. ಈಗ ತಮಿಳು ನಾಡಿಗೆ ಸೇರಿದ ಸಣ್ಣ ಕರಾವಳಿ ಪಟ್ಟಣದಲ್ಲಿ. ದೇಶದ ಅತ್ಯುನ್ನತ ಸಂವಿಧಾನಾತ್ಮಕ ಹುದ್ದೆಯನ್ನು ಅಲಂಕರಿಸುವ ಮೊದಲು ಅವರು ಬಾಹ್ಯಾಕಾಶ ಎಂಜಿನಿಯರ್ ಆಗಿ, ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಭಾರತದ ಕ್ಷಿಪಣಿ ತಯಾರಿಕಾ ಯೋಜನೆಯಲ್ಲಿ ಸಕ್ರಿಯ ವಾಗಿ ತೊಡಗಿಸಿಕೊಂಡವರು. 2007ರಲ್ಲೇ ಅವರ ರಾಷ್ಟ್ರಪತಿ ಅಧಿಕಾರಾವಧಿ ಮುಗಿದ ರೂ, ಶಾಲಾಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಜತೆ ಸಾವಿರಾರು ಸಂವಾದಗಳನ್ನು ನಡೆಸುವ ಮೂಲಕ ಅವರು ದೇಶದ ಉದ್ದಗಲ ಕ್ಕೂ ಜನಪ್ರಿಯತೆ ಗಳಿಸಿದ್ದರು. ಜನರ ರಾಷ್ಟ್ರ ಪತಿ, ಭಾರತದ ಕ್ಷಿಪಣಿ ಮನುಷ್ಯ ಎಂದು ಅವರು ಜನಜನಿತರಾಗಿದ್ದರು. ಅವೂಲ್ ಫಕೀರ್ ಝೈನುಲ್ ಆಬಿದೀನ್ ಅಬ್ದುಲ್ ಕಲಾಂ ಅವರ ತಂದೆ. ಝೈನುಲ್ ಆಬಿದೀನ್ ತಮಿಳುನಾಡಿನ ಯಾತ್ರಾ ಸ್ಥಳವಾದ ರಾಮೇಶ್ವರಂನಲ್ಲಿ ದೋಣಿ ತಯಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಈ ತಮಿಳು ಮುಸ್ಲಿಮ್ ಕುಟುಂಬಕ್ಕೆ ಸೇರಿದ ಅವರಿಗೆ ಆರ್ಥಿಕ ಮುಗ್ಗಟ್ಟು ಇದ್ದುದರಿಂದ ಬಾಲ್ಯದಲ್ಲೇ ಪತ್ರಿಕೆ ಹಂಚುತ್ತಿದ್ದರು. ನನ್ನ ಉತ್ಸಾಹಕ್ಕೆ ಯಾವ ಇತಿಮಿತಿಯೂ ಇರಲಿಲ್ಲ. ‘ನಾನು ಎಂಟು ವರ್ಷದವನಾಗಿದ್ದಾಗಲೇ, ನನ್ನ ಕುಟುಂಬದ ಆದಾಯಕ್ಕೆ ನಾನು ಅರ್ಥಪೂರ್ಣ ಕೊಡುಗೆ ನೀಡುತ್ತಿದ್ದೆ. ನನ್ನ ಹೊಸ ಕೆಲಸ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು’ ಎಂ...